ಎಶ್ಟೊಂದು ಟ್ಯಾಕ್ಸಿಗಳ ಮುಂದೆ ಕಡೆ ’ಕಬ್ಬಾಳಮ್ಮನ ಕ್ರುಪೆ’ ಅಂತ ಬರೆಯಿಸಿ ಹಾಕಿಕೊಂಡಿರುತ್ತಾರೆ. ಆದರೆ ಕಬ್ಬಾಳಮ್ಮ ಅಂದರೆ ಯಾರು ? ಇದನ್ನು ಹೇಗೆ ಬಿಡಿಸುವುದು ಎಂದು ಉಂಕಿಸಿದಾಗ ಹೊಳೆದುದು.
ಕಬ್ಬಾಳಮ್ಮ = ಕರು+ಪಾಳಮ್ಮ (ಸೇರಿಕೆಯಾದ ಮೇಲೆ ’ಪ’ ಕಾರ ’ಬ’ಕಾರ ಆಗುತ್ತದೆ)=> ಕರ್ಬಾಳಮ್ಮ( ’ರ’ಕಾರಕ್ಕೆ ಯಾವ ಬರಿಗೆ ಒತ್ತುಬರಿಗೆಯಾಗಿ ಬರುತ್ತದೆಯೋ ಅದೆ ಕೊನೆಗೆ ಉಲಿಕೆಯಲ್ಲಿ ಉಳಿಯುತ್ತದೆ) => ಕಬ್ಬಾಳಮ್ಮ
ಕರು ಮತ್ತು ಪಾಳಮ್ಮ ಎಂಬುದಕ್ಕೆ ಈ ಕೆಳಗೆ ಕೊಟ್ಟಿರುವ ಹುರುಳುಗಳಿವೆ.
ಕರು=ದೊಡ್ಡ, ಮಹಾ (Ka. kara, karu greatness, abundance, power)
ಪಾಳಮ್ಮ = ಪಾಳ್ಯದಮ್ಮ = ಹಳ್ಳಿಯಮ್ಮ = ಗ್ರಾಮದೇವತೆ (Ka. pāḷeya, pāḷya, pāḷye camp, settlement, hamlet)
ಅಂದರೆ,
ಕಬ್ಬಾಳಮ್ಮ ಅಂದರೆ ’ಮಹಾ ಗ್ರಾಮದೇವತೆ’ ಎಂಬ ಹುರುಳಿರುವುದು ಇದರಿಂದ ತಿಳಿಯುತ್ತದೆ.

No comments:
Post a Comment