ಇಲ್ಲಿ ಬಿಚ್ಚಿಡಲಾಗುವ ಗುಟ್ಟುಗಳೇ ಸರಿಯೆಂದು ಮಿಕ್ಕ ಗುಟ್ಟು ಇರಲಾರದು ಎಂದು ಬರಹಗಾರ ವಾದಿಸುತ್ತಿಲ್ಲ. ಒಂದು ಪದಕ್ಕೆ ಇರಬಹುದಾದ ಹಲವು ಗುಟ್ಟುಗಳಲ್ಲಿ ಒಂದನ್ನು ಇಲ್ಲವೆ ಒಂದಕ್ಕಿಂತ ಹೆಚ್ಚು ಗುಟ್ಟುಗಳನ್ನು ಈ ಬರಹಗಳಲ್ಲಿ ದೂಸರಿನೊಡನೆ(with reasoning) ತೋರಿಸಿಕೊಡಲಾಗಿದೆ. ಹಾಗಾಗಿ ಬೇರೆಯವರಿಂದ ಇನ್ನು ಹೆಚ್ಚು ಗುಟ್ಟುಗಳು ಹೊರಬಂದರೆ ಒಳ್ಳೆಯದೇ ಎಂಬುದು ಬರಹಗಾರನ ನಿಲುವು.

Tuesday, September 11, 2012

ತಮಿಳು

  ನಮಗೆ ನಾವೇ ಹೆಸರು ಇಟ್ಟುಕೊಳ್ಳುವುದಿಲ್ಲ. ಇಟ್ಟುಕೊಳ್ಳುವುದು ಬೇಕಾಗಿಲ್ಲ. ಯಾರೇ ಅದರು ಅವರಿಗೆ ತಮ್ಮ ಗುರುತಿಗೆ ಯಾವ ಹೆಸರು ಬೇಕಾಗಿರುವುದಿಲ್ಲ. ಆದರೆ ಬೇರೆಯವರು ಒಂದು ವ್ಯಕ್ತಿಯನ್ನು, ಒಂದು ಗಿಡವನ್ನು, ಒಂದು ಮರವನ್ನು ಇಲ್ಲವೆ ಒಂದು ಊರನ್ನು ಗುರುತಿಸಲು ಒಂದು ಹೆಸರು ಕೊಡಬೇಕಾಗುತ್ತದೆ/ಕೊಡುತ್ತಾರೆ. ಅದಕ್ಕಾಗಿಯೇ 'ಕೊಟ್ಟ ಹೆಸರು'(given name) ಎಂದು ದಾಕಲೆಗಳಲ್ಲಿ ಬಳಸುವುದುಂಟು. ಮಾವಿನ ಮರಕ್ಕೆ ಹಾಗೆ ಕರೆಯುತ್ತಾರೆಂದು ಅದಕ್ಕೇನಾದರೂ ಗೊತ್ತೆ ? ಮನುಶ್ಯನು ತನಗಾಗಿ ಮಾಡಿಕೊಂಡ ಸವ್ಕರ್ಯಗಳಲ್ಲಿ ಇದೂ ಒಂದು.

ಇದೇ ದೂಸರನ್ನು ಮುಂದಿಟ್ಟುಕೊಂಡು 'ತಮಿಳ್' ಎಂಬ ಪದದ ಬಗ್ಗೆ ಉಂಕಿಸಿದಾಗ,

ತೆನ್ + ಮೊಳಗು => ತೆನ್ಮೊಳಗು => ತೆಮ್ಮೊಳಗು => ತೆಮ್ಮೊಳಿ

ತೆನ್/ತೆಂಕು ಅಂದರೆ ಕನ್ನದ, ತಮಿಳೆರಡರಲ್ಲೂ ದಕ್ಶಿಣ, south ಎಂದೇ ಹುರುಳು. ತೀರ ಹಳೆಯ ಕಾಲದಿಂದಲೂ
ಕರ್ನಾಟಕದ ಇಲ್ಲವೇ ಕನ್ನಡಿಗರ ನೆಲದ ದಕ್ಶಿಣಕ್ಕೆ ಇದ್ದುದು ತಮಿಳರೇ. ಮಲೆಯಾಳವೂ ಕೂಡ ತಮಿಳಿನಿಂದ ಒಡೆದು ಬಂದ ಒಂದು ನುಡಿ ಎಂಬುದನ್ನು ಇಲ್ಲಿ ನಾವು ಗಮನಿಸಬಹುದು. ಅಂದರೆ ಈಗಿನ ಕೇರಳ ಮತ್ತು ತಮಿಳು ನಾಡು ಸೇರಿದರೆ ಕರ್ನಾಟಕದಿಂದ ದಕ್ಶಿಣಕ್ಕೆ ಬರೀ ತಮಿಳೇ ಇತ್ತು ಎಂಬುದು ತಿಳಿಯುತ್ತದೆ.
3449 Ta. teṉ south, southern region; Ka. teṅ-gāli south wind; teṅka, teṅkal, teṅku, tembu, ṭeṅkalu, ṭeṅku the south [DED 3449]
ಮೊಳಗು ಎಂದರೆ 'ಇನಿತದ ಪರೆಗಳಿಂದ ಬರುವ ಸದ್ದು'(ಸಂಗೀತ ವಾದ್ಯಗಳ ಸದ್ದು) ಎಂಬ ಹುರುಳು ಇದೆ. ಈಗಲೂ ಕನ್ನಡಿಗರು ತಮಿಳಿನ/ತಮಿಳರ ಬಗ್ಗೆ ತಮ್ಮಲ್ಲಿ ಮಾತಾಡಿಕೊಳ್ಳುವಾಗ 'ಅದೇನೊ ಇಂಡ್ರ, ಪಂಡ್ರ ಅಂತ ತಮಿಳಿನಲ್ಲಿ ಮಾತಾಡಿದ' ಅಂತ ಹೇಳುವುದುಂಟು. ಅಂದರೆ ಕನ್ನಡಿಗರಿಗೆ ತಮಿಳು ತಿಳಿಯದ ಬಾಶೇ . ಆ ಬಾಶೆಯನ್ನು ಗುರುತು ಹಿಡಿದುಕೊಳ್ಳಲು ಅವರು ಗಮನಿಸಿದ್ದು ಕೆಲವು ಸದ್ದುಗಳು (ಇಂಡ್ರ, ಪಂಡ್ರ). ಈ ಸದ್ದುಗಳ ಮೂಲಕವೇ ಅದು ತಮಿಳು ಎಂದು ಅವರು ತಿಳಿದುಕೊಳ್ಳುತ್ತಿದ್ದರು.
Ka. mor̤agu to sound as certain musical instruments, roar, thunder, play certain instruments; n. sound of certain musical instruments, roaring, thunder.
Ta. mor̤i (-v-, -nt-) to say, speak; n. word, saying, language [DED 4989]

ಈಗ ಈ ಎರಡು ಪದಗಳನ್ನು ಕೂಡಿಸಿ ನೋಡಿದರೆ 'ತೆನ್ಮೊಳಿ'. ಅಂದರೆ ಕರ್ನಾಟಕದ ದಕ್ಶಿಣದಿಂದ ಬಂದವರು ಮಾತನಾಡಿಕೊಳ್ಳುವ ಒಂದು ಸದ್ದು ಇಲ್ಲವೆ 'ದಕ್ಶಿಣದ ಸದ್ದು', 'ತೆಂಕಿನ ಸದ್ದು' ಎಂಬುದಾಗಿ  ಕನ್ನಡಿಗರು ತಮಿಳು ನುಡಿಯನ್ನು ಕರೆದಿರಬೇಕು. ಮುಂದೆ ಆದೇ 'ತಮಿಳು' ಎಂದಾಯಿತು.

ತಮಿಳರೇ ತಮ್ಮ ನುಡಿಗೆ ತಮ್+ಮೊಳಿ (=ತನ್ನ ನುಡಿ) ಎಂದು ಹೆಸರು ಇಟ್ಟಿಕೊಂಡಿರಬಹುದಲ್ಲವೆ ಎಂಬ ಕೇಳ್ವಿ ಬರಬಹುದು. ಹಾಗೆ ಆಗಿರುವುದಕ್ಕೆ ಎಡೆ ಕಡಿಮೆ ಏಕೆಂದರೆ 'ತಮ್ಮ ಹೆಸರನ್ನು ತಾವೇ ಇಟ್ಟುಕೊಳ್ಳುವುದಿಲ್ಲ/ಇಟ್ಟುಕೊಳ್ಳಬೇಕಾಗಿಲ್ಲ' ಎಂಬ ತತ್ವಕ್ಕೆ ಅದು ಎದುರಾಗಿದೆ.

4 comments:

  1. ಕನ್ನಡದಲ್ಲಿ ತಮಿಳರನ್ನು ತಂಬಳ(<ತೆಂಬಳ) , ತಿಗಳ (<ತೆಂಕಳ) ಎಂಬ ಪದಗಳೂ ಇವೆ. ಇದೆಲ್ಲ ’ತೆಂಕು’ - ಇದರ ಕಡೆಗೆ ಕಯ್ ತೋರಿಸುತ್ತವೆ.
    ತೆಂಕಿನಿಂದ ಬಂದವರೇ, ತೆಂಕಿನಲ್ಲಿ ಇದ್ದವರೇ ತಮಿಳರು, ತಂಬಳರು, ತಿಗಳರು.

    ReplyDelete

  2. ತಿಗುಳ ಅಥವಾ ತಿಗಳ ಎನ್ನುವುದು ದಕ್ಷಿಣ ಭಾರತದ ಬಲಿಷ್ಠ ಜನಾಂಗದ ಹೆಸರಾಗಿದೆ.

    ಅರವ, ತಿಗಳ, ದ್ರಾವಿಡ ಭಾಷೆಗಳಲ್ಲೊಂದು, ಕನ್ನಡ ಹಾಗು ತಮಿಳು ಮಿಶ್ರಿತ ನುಡಿ, ಈ ಮಿಶ್ರಿತ ನುಡಿಯನ್ನು ತಿಗಳಾರಿ ಭಾಷೆ ಎಂದು ಕರೆಯಲಾಗುತ್ತದೆ.
    ತಿಗಳ ಕ್ಷತ್ರಿಯ (ವಹ್ನಿಕುಲ ಕ್ಷತ್ರಿಯ ) ಜನಾಂಗದವರ ಮಾತ್ರು ನುಡಿಯೆ(mother tongue ) , ಈ ತಿಗಳಾರಿ ಭಾಷೆ.

    ತಿಗಳ (Tigala or Thigala ) ಅಥವಾ ತಿಗುಳ (Thigula) ಎಂಬ ಪದವು ವಹ್ನಿಕುಲ(vahnikula, vannikula) , ಅಗ್ನಿಕುಲ (Agnikula) ಎಂಬ ಪದಗಳಿಗೆ ಸಮನಾಗಿದೆ. (Tamil) ತಮಿಳಿನಲ್ಲಿ ತಿ(Ti, Thi) ಎಂದರೆ ಬೆಂಕಿ (fire), ಕುಲ Kula (community) ಎನ್ನುತ್ತಾರೆ. (Sanskrit) ಸಂಸ್ಕೃತ ಭಾಷೆಯಲ್ಲಿ ವಹ್ನಿ (Vahni ) , ಅಗ್ನಿ (Agni) ಹಾಗೂ ಕನ್ನಡ ಭಾಷೆಯಲ್ಲಿ ಬೆಂಕಿ (Benki), (Tigalari language ) ತಿಗಳಾರಿ ಭಾಷೆಯಲ್ಲಿ ನೆರುಪ್ಪು(Neruppu ) ಎಂದು ಕರೆಯಲಾಗುತ್ತದೆ.

    ತಿಗಳ ಕ್ಷತ್ರಿಯ(Tigala kshatriya) , ವಹ್ನಿಕುಲ ಕ್ಷತ್ರಿಯ(Vahnikula Kshatriya or Vannikula kshatriya) , ಅಗ್ನಿಕುಲ ಕ್ಷತ್ರಿಯ (Agnikula kshatriya or Agni vamsha kshatriya) ಈ ಮೂರು ಜನಾಂಗದವರು ವನ್ನಿಯಾರ್ (Vanniyar) ಎಂಬ ಕುಲಕ್ಕೆ ಸೇರಿದವರಾಗಿರುತ್ತಾರೆ.

    ReplyDelete
  3. ಉಪಯುಕ್ತ ಮಾಹಿತಿ

    ReplyDelete
  4. ಉಪಯುಕ್ತ ಮಾಹಿತಿ

    ReplyDelete